ಹೂವಿನ ಸಂತೆಗೆ
ಲಕ್ಕಿಹೂವಿನ ಸಂತೆಗೆ ಬಂದಿರೋ ಗಾಳಿಗೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ
ನಿನ್ನದೇ ಯೋಚನೆ ನಿನ್ನದೇ ಯೋಚನೆ || ಪ ||
ಮನದ ಮರೆಯ ಕಿಟಕೆಯಿಂದ
ನುಸುಳಿ ಬಂದ ಬಿಸಿಲು ನೀನೆ
ಸನಿಹ ಬಂದು ತಿಳಿಸು ಬೇಗ
ನಿನಗೂ ಉಂಟೆ ವಿರಹ ಬೇನೆ
ರೂಪವ ತಾಳಿದ ನೀನೆ ನನ್ನ ಕಲ್ಪನೆ || ೧ ||
ಬೊಗಸೆಯಲ್ಲಿ ಅರಳೋ ನಿನ್ನ
ಮೊಗವ ನೋಡಿ ಹೊಳೆಯುತ್ತೇನೆ
ಹತ್ತು ಹಲವು ಗೀತೆಯಿಂದ
ಒಲವ ಹೇಳು ಮರೆಯದೇನೆ
ಜೀವದ ಪುಸ್ತಕ ನಿನಗೇ ಇನ್ನು ಅರ್ಪಣೆ || ೨ ||
ಲಕ್ಕಿ
ಚಿತ್ರ ನೋಡಿ